ಚೂಡಾಲಾ
ಸೌರಾಷ್ಟ್ರಾಧಿಪತಿಯ ಮಗಳು; ಮಾಲವಪುರದ ರಾಜ ಶಿಖಿಧ್ವಜನ ಪತ್ನಿ. ಕೆಲಕಾಲ ಸಂಸಾರ ಸುಖವನ್ನು ಅನುಭವಿಸಿದ ಈಕೆ ಭೋಗಮಯಜೀವನ ನಶ್ವರವೆಂದು ತಿಳಿದು ಮನಸ್ಸನ್ನು ಆತ್ಮಜ್ಞಾನದ ಕಡೆಗೆ ಹರಿಸಿ ಭೋಗಜೀವನದಿಂದ ಬೇರೆಯಾದಳು. ಆತ್ಮಜ್ಞಾನಿಯಾದ ಈಕೆಯ ಉಪದೇಶದಿಂದ ಶಿಖಿಧ್ವಜನೂ ಜ್ಞಾನಸಂಪನ್ನನಾದ. ಇಬ್ಬರೂ ರಾಜ್ಯವನ್ನು ತೊರೆದು ಅರಣ್ಯಕ್ಕೆ ತೆರಳಿದರೆಂದು ಯೋಗವಾಸಿಷ್ಠದ ನಿರ್ವಾಣಪ್ರಕರಣದಲ್ಲಿ ಹೇಳಲಾಗಿದೆ.			(ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ